.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052
Phone No 22096600, Fax – 22251229
E-mail – fm@kfcsc.com

ಸಂಕ್ಷಿಪ್ತ

ಅಲ್ಪಾವಧಿ ಮರು ಟೆಂಡರ್ ಪ್ರಕಟಣೆ

   ಸಂಖ್ಯೆ/ಕಆನಾಸನಿನಿ/ಸಾವಿಪ/ತಾ.ಎಣ್ಣೆ/ಟೆಂಡರ್/2008-09/                                                                ದಿನಾಂಕ: 04-08-2008  

ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ರಾಜ್ಯದ ಬೆಂಗಳೂರು ದಕ್ಷಿಣ ಮತ್ತು ಉತ್ತರ, ಬಿಜಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ರಾಮನಗರ, ಶಿವಮೊಗ್ಗ, ಉತ್ತರ ಕನ್ನಡ, ಚಾಮರಾಜನಗರ, ದಕ್ಷಿಣ ಕನ್ನಡ/ಉಡುಪಿ, ಧಾರವಾಡ, ಕೊಪ್ಪಳ, ಮಂಡ್ಯ ಮತ್ತು ರಾಯಚೂರು ಜಿಲ್ಲೆಗಳಲ್ಲಿನ ಸಗಟುಮಳಿಗೆಗಳಿಗೆ ಪೊಟ್ಟಣೀಕರಿಸಿ ರಟ್ಟಿನ ಪಟ್ಟಿಗೆಗಳಲ್ಲಿ ತುಂಬಿಸಿದ (1 ಲೀಟರ್ ತಾಳೆ ಎಣ್ಣೆ ಇರುವ 10-12 ಪ್ಲಾಸ್ಟಿಕ್ ಚೀಲಗಳು) ತಾಳೆಎಣ್ಣೆಯನ್ನು ಮಂಗಳೂರು ಘಟಕದಿಂದ ಸಾಗಾಣಿಕೆ ಮಾಡಲು ಅರ್ಹ ಸಾಗಾಣಿಕೆ ಗುತ್ತಿಗೆದಾರರು / ಲಾರಿ ಮಾಲೀಕರಿಂದ ನಿಗದಿತ ನಮೂನೆಯಲ್ಲಿ ಮೊಹರಾದ ಜಿಲ್ಲಾವಾರು ಅಲ್ಪಾವಧಿ ಮರು ಟೆಂಡರ್ ಕÀÀ್ಪರೆಯಲಾಗಿದೆ. ಈ ಸಂಬಂದ ಟೆಂಡರ್ ಫಾರಂಗಳನ್ನು ದಿನಾಂಕ 06.08.2008 ರಿಂದ 12.08.2008 ರ ವರೆಗೆ ನಿಗಮದ ಸಂಬಂಧಿಸಿದ ಜಿಲ್ಲಾ ಕಛೇರಿಗಳಲ್ಲಿ ಕೆಲಸದ ವೇಳೆÉಯಲ್ಲಿ ರೂ. 500/- (ರೂ. ಐದುನೂರು ಮಾತ್ರÀ) ಗಳನ್ನು ಪಾವತಿಸಿ (ಹಿಂದಿರುಗಿಸಲಾಗುವುದಿಲ್ಲ) ಪಡೆಯಬಹುದಾಗಿದೆ ಹಾಗೂ ರಾಮನಗರ ಜಿಲ್ಲೆಗೆ ಬೆಂಗಳೂರು-ದಕ್ಷಿಣ ಜಿಲ್ಲಾ ಕಛೇರಿಯಲ್ಲಿ, ಉಡುಪಿ ಜಿಲ್ಲೆಗೆ ಮಂಗಳೂರು ಜಿಲ್ಲಾ ಕಛೇರಿಯಲ್ಲಿ, ಅರ್ಜಿ ಫಾರಂಗಳನ್ನು ಪಡೆಯಬಹುದಾಗಿದೆ. ಭರ್ತಿಮಾಡಿದ ಟೆಂಡರ್ ಅರ್ಜಿಗಳನ್ನು ದಿನಾಂಕ 13-08-2008 ರ ಸಂಜೆ 5.00 ಘಂಟೆಯವರೆಗೆ ಸಂಬಂಧಿಸಿದ ಜಿಲ್ಲಾ ಕಛೇರಿಗಳಲ್ಲಿ ಸ್ವೀಕರಿಸಲಾಗುವುದು. ದಿನಾಂಕ 14-08-2008 ರಂದು ಬೆಳಿಗ್ಗೆ 11.00 ಘಂಟೆಗೆ ಟೆಂಡರ್‍ದಾರರು / ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಟೆಂಡರ್ ನ ಲಕೋಟೆ-1 (ತಾಂತ್ರಿ ಕಷರತ್ತು) ಲಕೋಟೆ-2ನ್ನು (ಹಣಕಾಸಿನ ಷರತ್ತು) ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ www.kfcsc.com ಸಂಪರ್ಕಿಸಬಹುದಾಗಿದೆ. .

  ಟೆಂಡರ್ ಷರತ್ತು ಮತ್ತು ನಿಯಮಾವಳಿಗಳು :

  ಅರ್ಹತೆ:-

  1.  ಟೆಂಡರ್ ಸಲ್ಲಿಸುವವರು ಕನಿಷ್ಠ 10 ಮೆ.ಟನ್ ಸಾಮಥ್ರ್ಯದ 3 ಲಾರಿಗಳನ್ನು ತಮ್ಮ ಹೆಸರಿನಲ್ಲಿ/ತಮ್ಮ ಸಂಸ್ಥೆಯ ಹೆಸರಿನಲ್ಲಿ ಹೊಂದಿರಬೇಕು. ಅವಶ್ಯಕತೆಗೆ ತಕ್ಕಂತೆ ಹೆಚ್ಚಿನ ಲಾರಿಗಳನ್ನು ಒದಗಿಸುವ ಸಾಮಥ್ರ್ಯ ಹೊಂದಿರಬೇಕು.

  2. ಸದರಿ ವಾಹನಗಳು ಹತ್ತು ವರ್ಷಕ್ಕಿಂತ ಹಳೆಯದಾಗಿರಬಾರದು.

  3. ಟೆಂಡರದಾರರು ಇದೇ ತರಹದ ಸಾಗಾಣಿಕೆ ನಿರ್ವಹಿಸಿರುವ ಅನುಭದ ಬಗ್ಗೆ ಸರ್ಕಾರಿ ಇಲಾಖೆ/ನಿಗಮ/ಖಾಸಗಿ ಸಂಸ್ಥೆಗಳಿಂದ ಪಡೆದ ಧೃಡೀಕರಣ ಪತ್ರ ನೀಡಬೇಕು.

  4. ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ / ನಿಗಮದ ನೌಕರರು ಅಥವಾ ಅವರ ಹತ್ತಿರದ ಸಂಬಂಧಿಕರು ಟೆಂಡರ್‍ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ.

  5. ಟೆಂಡರ್‍ದಾರರು ಇಎಂಡಿ ಮೊತ್ತವಾಗಿ ರೂ.50,000/- ಮೊತ್ತವನ್ನು ಡಿ.ಡಿ ರೂಪದಲ್ಲಿ ತಮ್ಮ ಟೆಂಡರ್‍ನೊಂದಿಗೆ ಸಲ್ಲಿಸಬೇಕಾಗುತ್ತದೆ. ಇಎಂಡಿ ರಹಿತ ಟೆಂಡರ್‍ಗಳನ್ನು ಸ್ವೀಕರಿಸಲಾಗುವುದಿಲ್ಲ.

  6. ಯಶಸ್ವಿ ಟೆಂಡರ್‍ದಾರರು ರೂ.5 ಲಕ್ಷ ಭದ್ರತಾ ಠೇವಣಿ ನೀಡಬೇಕಾಗುತ್ತದೆ. ಈ ಮೊತ್ತದಲ್ಲಿ ರೂ.1 ಲಕ್ಷ ಡಿ.ಡಿ ರೂಪದಲ್ಲಿಯೂ ಉಳಿದ ರೂ.4 ಲಕ್ಷವನ್ನು ಬ್ಯಾಂಕ್ ಗ್ಯಾರಂಟಿ ರೂಪದಲ್ಲಿಯೂ ನೀಡಬೇಕಾಗುತ್ತದೆ.

  7. ಯಶಸ್ವಿ ಟೆಂಡರ್‍ದಾರರು ಮೂರು ದಿನಗಳೊಳಗಾಗಿ ನಿಯಮಾವಳಿಯಂತೆ ಕರಾರು ಮಾಡಿಕೊಂಡು ಭದ್ರತಾ ಠೇವಣಿ, ಡಿ.ಡಿ ಮತ್ತು ಬ್ಯಾಂಕ್ ಗ್ಯಾರಂಟಿ ಸಲ್ಲಿಸಬೇಕಾಗುತ್ತದೆ.

  8. ಟೆಂಡರ್‍ದಾರರು ಟೆಂಡರ್ ತೆರೆಯುವ ಸಮಯದಲ್ಲಿ ಖುದ್ದಾಗಿ ಇಲ್ಲವೆ ತಮ್ಮ ಅಧಿಕೃತ ಪ್ರತಿನಿಧಿಗಳ ಮೂಲಕ ಹಾಜರಿರಬೇಕು. ಪ್ರತಿನಿಧಿಗಳು ಸೂಕ್ತ ಅಧಿಕಾರಪತ್ರ ಹೊಂದಿರತ್ಕದ್ದು.

  9. ಯಶಸ್ವಿ ಟೆಂಡರ್‍ದಾರರು ತಮ್ಮ ಖಚಿತ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಸಂಪರ್ಕಕ್ಕಾಗಿ ಸಲ್ಲಿಸತಕ್ಕದ್ದು.


  ತಾಂತ್ರಿಕ ಷರತ್ತು:-

  1. ಟೆಂಡರ್‍ದಾರರು ತಮ್ಮ ಟೆಂಡರ್‍ಗಳನ್ನು ಮೊಹರು ಮಾಡಲಾದ ಎರಡು ಲಕೋಟೆಗಳಲ್ಲಿ ತಾಂತ್ರಿಕ ಷರತ್ತು ಮೊದಲನೆ ಲಕೋಟೆ (ದಾಖಲೆಗಳು) ಎರಡನೆ ಲಕೋಟೆಯಲ್ಲಿ ನಿಗದಿತ ನಮೂನೆಯಲ್ಲಿ ಸಾಗಾಣಿಕೆ ದರ ನಮೂದಿಸಿ ಪ್ರತ್ಯೇಕವಾಗಿ ಸಲ್ಲಿಸಬೇಕು.

  2. ಮೊದಲನೆಯ ಲಕೋಟೆಯಲ್ಲಿ ಟೆಂಡರ್‍ದಾರರು ಅಧಿಕೃತವಾಗಿ ಸಹಿ ಮಾಡಿದ ಮೂಲ ಟೆಂಡರ್ ನಮೂನೆಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಒಳಗೊಂಡಿರಬೇಕು.

  C) ಇಎಂಡಿ ಮೊತ್ತವಾಗಿ ರೂ.50,000/-ವನ್ನು ನಿಗಮದ ಹೆಸರಿನಲ್ಲಿ ಆಯಾ ಜಿಲ್ಲಾ ಕೇಂದ್ರಗಳಲ್ಲಿ ಪಾವತಿಯಾಗುವಂತೆ ರಾಷ್ಟ್ರೀಕೃತ/ಶೆಡ್ಯೂಲ್‍ಬ್ಯಾಂಕ್‍ನಿಂದ ಪಡೆಯಲಾದ ಡಿ.ಡಿ.

  D) ಸಾಗಾಣಿಕೆ ಅನುಭದ ಬಗ್ಗೆ ಧೃಡೀಕರಣ ಪತ್ರ.

  E) ತಮ್ಮ ಹೆಸರಿನಲ್ಲಿ ಹೊಂದಿರುವ ಲಾರಿಗಳ ಬಗ್ಗೆ ಆರ್.ಟಿ.ಒ ರಿಂದ ಪಡೆಯಲಾದ ರಿಜಿಸ್ಟರ್-ಬಿ ಎಕ್ಸ್‍ಟ್ರಾಕ್ಟ್ ಹಾಗೂ ಆರ್.ಸಿ ಬುಕ್ ಪ್ರತಿಗಳು (ಹತ್ತು ವರ್ಷಕ್ಕಿಂತ ಹಳೆಯದಾದ ಲಾರಿಗಳನ್ನು ಪರಿಗಣಿಸಲಾಗುವುದಿಲ್ಲ)

  F) ಆರ್ಥಿಕ ಸ್ಥಿತಿಗತಿ ಬಗ್ಗೆ ಸಾಮಥ್ರ್ಯದ ಧೃಡೀಕರಣ ಪತ್ರ. ಕಳೆದ ಎರಡು ವರ್ಷಗಳ ಆಡಿಟೆಡ್ ಲಾಭ-ನಷ್ಟ ತ:ಖ್ತೆ.

  G) ಆಧಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಹಿಂದಿನ ವರ್ಷದ ಧೃಡೀಕಣ ಪತ್ರ (copy of Income Tax return duly attested)

  H) ಸೇವಾ ತೆರಿಗೆ, ವ್ಯಾಟ್‍ಗೆ ಸಂಬಂಧಿಸಿದ ನೊಂದಣಿ ಪ್ರಮಾಣಪತ್ರದ ಪ್ರತಿ ಹಾಗೂ ಹಿಂದಿನ ವರ್ಷದ ಸೇವಾ ತೆರಿಗೆ ಪಾವತಿಯ ಧೃಡೀಕೃತ ಪತ್ರ.

  I) ಟೆಂಡರ್‍ನಲ್ಲಿ ಭಾಗವಹಿಸುವವರು ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ನ್ಯಾಯಾಲಯದ ಮುಂದೆ ಯಾವುದೇ ಕ್ರಿಮಿನಲ್ ಮೊಖದ್ದಮೆಗಳನ್ನು ಹೊಂದಿಲ್ಲ ವೆಂಬುದರ ಬಗ್ಗೆ ಹಾಗೂ ತಾವು ಅಥವಾ ತಮ್ಮ ಸಂಸ್ಥೆಯನ್ನು ಯಾವುದೇ ಸಂಸ್ಥೆ/ಇಲಾಖೆಯಿಂದ ಕಪ್ಪುಪಟ್ಟಿಗೆ ಸೇರಿಸಿಲ್ಲ ಎಂಬ ಬಗ್ಗೆ ಪ್ರಮಾಣಪತ್ರ (ಅಫಿಡೆವಿಟ್) ಸಲ್ಲಿಸುವುದು.

  J) ಟೆಂಡರ್ ಸಲ್ಲಿಸುವ ಸಂಸ್ಥೆಯು ಪಾಲುದಾರಿಕೆ ಸಂಸ್ಥೆಯಾಗಿದ್ದಲ್ಲಿ, ಪಾಲುದಾರಿಕೆ ಕರಾರು ಪತ್ರ (ಠಿಚಿಡಿಣಟಿeಡಿshiಠಿ ಜeeಜ) ಪತ್ರದ ಪ್ರತಿಯನ್ನು ಸಲ್ಲಿಸುವುದು. ಸಹಕಾರಿ ಸಂಸ್ಥೆ ಇಲ್ಲವೆ ಕಂಪನಿಯಾಗಿದ್ದಲ್ಲಿ ಪಾಲುದಾರಿಕೆ ಸಂಸ್ಥೆಯ ಬೈಲಾ ಹಾಗೂ ಕಂಪನಿಯ ಮೆಮೊರಾಂಡಮ್ ಪ್ರತಿಯನ್ನು ಸಲ್ಲಿಸುವುದು.

  K) ಟೆಂಡರ್‍ಗೆ ಸಹಿ ಮಾಡಿರುವವರು ತಾವು ಹೊಂದಿರುವ ಅಧಿಕಾರದ ಬಗ್ಗೆ ಸೂಕ್ತ ಆಧಿಕಾರ ಪತ್ರ (power of attorney & authorization to sign the tender on behalf of the firm / company /society) ಸಲ್ಲಿಸುವುದು.

  ಸೂಚನೆ:-

  ಲಕೋಟೆ-1ರಲ್ಲಿ ಮೇಲಿನ ದಾಖಲೆಗಳನ್ನು ಲಗತ್ತಿಸಿಲ್ಲದಿದ್ದರೆ ಅಂತಹ ಟೆಂಡರ್‍ಗಳನ್ನು ಅನರ್ಹಗೊಳಿಸಲಾಗುವುದು. ಆ ಟೆಂಡರ್‍ಗಳಿಗೆ ಸಂಬಂಧಿಸಿದ ಹಣಕಾಸಿನ ಬಿಡ್ಡನ್ನು (ಎರಡನೇ ಲಕೋಟೆ) ತೆರೆಯಲಾಗುವುದಿಲ್ಲ.


  ಎರಡನೇ ಲಕೋಟೆ:-

  ನಿಗದಿತ ನಮೂನೆಯಲ್ಲಿ ತಮ್ಮ ಸಾಗಾಣಿಕೆ ದರಗಳನ್ನು ಪ್ರತಿ 100 ಲೀಟರ್‍ಗೆ/ಪ್ರತಿ ಕಿ.ಮೀ ಗೆ ಸ್ಲಾಬ್‍ನಂತೆ ಸ್ವಷ್ಟವಾಗಿ ಅಕ್ಷರ ಹಾಗೂ ಅಂಕೆಗಳಲ್ಲಿ ನಮೂದಿಸಿ ಸಲ್ಲಿಸುವುದು. ಯಾವುದೇ ತಿದ್ದುಪಡಿ ಮಾಡಿದ್ದಲ್ಲಿ ಅಂತಹ ತಿದ್ದುಪಡಿಗೆ ಧೃಡೀಕರಿಸಿ ಪೂರ್ಣ ಸಹಿ ಮಾಡುವುದು. ಸೂಕ್ತ ಧೃಡೀಕರಣ ಇಲ್ಲದ ತಿದ್ದುಪಡಿಗಳನ್ನು ಪರಿಗಣಿಸಲಾಗುವುದಿಲ್ಲ.

  ವೇಳಾಪಟ್ಟಿ:-

  1) ಟೆಂಡರ್ ದಾಖಲೆಗಳ ವಿತರಣೆ ಆರಂಭ ದಿನಾಂಕ 06-08-2008.
  2) ಟೆಂಡರ್ ಅರ್ಜಿ ಪಡೆಯಲು ಕೊನೆಯ ದಿನಾಂಕ 12-08-2008.
  3) ಭರ್ತಿ ಮಾಡಿದ ಟೆಂಡರ್ ಸ್ವೀಕೃತಿ ಕೊನೆಯ ದಿನಾಂಕ 13-08-2008 ಸಂಜೆ 5.00 ಗಂಟೆಯ ವರೆಗೆ (ನಿಗದಿತ ಅವದಿ ನಂತರ ತಡವಾಗಿ ಸ್ವೀಕೃತವಾದ ಟೆಂಡರ್ ಅರ್ಜಿಗಳನ್ನು ತಿರಸ್ಕರಿಸಲಾಗುವದು).
  4) ಟೆಂಡರ್ ತೆರೆಯುವ ದಿನಾಂಕ 14-08-2008ರ ಬೆಳಿಗ್ಗೆ 11.00 ಗಂಟೆಗೆ (ನಿಗಮದ ಆಯಾ ಜಿಲ್ಲಾ ಕಛೇರಿಗಳಲ್ಲಿ) (ತಾಂತ್ರಿಕ ಷರತ್ತುಗಳ ಲಕೋಟೆ-1 ಮತ್ತು 2.)

        Sd/-

  ವ್ಯವಸ್ಥಾಪಕ ನಿರ್ದೇಶಕರು.