ಪ್ಯಾಕಿಂಗ್ ಘಟಕ

ಎಣ್ಣೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬುವ ಘಟಕವನ್ನು ನಿಗಮವು ಪೂರ್ಣ ಸೌಲಭ್ಯಗಳೊಂದಿಗೆ ಬೆಂಗಳೂರಿನ ಕದಿರೇನಹಳ್ಳಿಯಲ್ಲಿ ಸ್ಥಾಪಿಸಲಾಗಿದೆ. ಇದು 11500 ಮೆಟ್ರಿಕ್ ಟನ್‍ನಷ್ಟು ತುಂಬುವ ಶಕ್ತಿ ಪಡೆದಿದೆ.

ಈ ಘಟಕವು ದ್ವಿಶಿರವುಳ್ಳ ಪ್ಯಾಕ್ ಮಾಡುವ ಯಂತ್ರ ಹೊಂದಿದ್ದು, ದಿನಕ್ಕೆ 80 ಮೆಟ್ರಿಕ್ ಟನ್‍ನಷ್ಟು ಎಣ್ಣೆಯನ್ನು ಪ್ಯಾಕಿಂಗ್ ಮಾಡುವ ಸಾಮಥ್ರ್ಯ ಹೊಂದಿರುತ್ತದೆ. ಆರ್.ಬಿ.ಡಿ. ಪಾಮೋಲಿನ್ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಂಡು, ಅದನ್ನು ಅರ್ಧ ಮತ್ತು ಒಂದು ಲೀಟರ್ ಚೀಲಗಳಲ್ಲಿ ತುಂಬಿ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಪಾಮೋಲಿನ್ ಎಣ್ಣೆಯನ್ನು 'ಧನ್ಯ' ಎಂಬ ಹೆಸರಿನಿಂದ ಮಾರಾಟ ಮಾಡಲಾಗುತ್ತದೆ.