ಸಾರ್ವಜನಿಕ ವಿತರಣೆ ಸಿಸ್ಟಮ್

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಯುಕ್ತರಿಂದ ಪ್ರತಿ ತಿಂಗಳು ಆಹಾರ ಧಾನ್ಯ ಮತ್ತು ಸಕ್ಕರೆಯನ್ನು ಜಿಲ್ಲಾವಾರು ಹಂಚಿಕೆ ನೀಡಲಾಗುತ್ತದೆ. ಆದಕ್ಕನುಗುಣವಾಗಿ ಇಲಾಖೆಯ ಉಪ ಆಯುಕ್ತರಿಂದ ಅದನ್ನು ತಾಲ್ಲೂಕುವಾರು ಮರು ಹಂಚಿಕೆಯನ್ನು ಮಾಡಲಾಗುತ್ತದೆ. ಬೆಂಗಳೂರಿನ ಐ.ಆರ್.ಎ. ವಿಭಾಗಕ್ಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಿಂದ ಹಂಚಿಕೆಯ ಆದೇಶ ನೀಡಲ್ಪಡುತ್ತದೆ.

ಈ ಹಂಚಿಕೆಯ ಆಧಾರದ ಮೇಲೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರು, ಭಾರತ ಆಹಾರ ನಿಗಮಕ್ಕೆ ಹಣ ಪಾವತಿ ಮಾಡಿ, ಅವರಿಂದ ಬಿಡುಗಡೆ
ಪತ್ರವನ್ನು ಪಡೆದು, ಆಹಾರ ಧಾನ್ಯಗಳನ್ನು ಅಧಿಕೃತ ಸಾಗಾಣಿಕೆದಾರರ ಮೂಲಕ ತಮ್ಮ ಮಳಿಗೆಗಳಿಗೆ ಸಾಗಿಸಲಾಗುತ್ತದೆ. ಆಹಾರ ಧಾನ್ಯಗಳ ಗುಣಮಟ್ಟವನ್ನು ನಿರ್ಧರಿಸಲು, ಸಾಧಾರಣ ಸರಾಸರಿ ಗುಣಮಟ್ಟದಲ್ಲಿ ಪರೀಕ್ಷಿಸಲಾಗುವುದು.

ಆಹಾರ ಧಾನ್ಯಗಳನ್ನು ಪಡೆಯುವುದು ಮತ್ತು ಅವುಗಳನ್ನು ಚಿಲ್ಲರೆ ಮಾರಾಟಕ್ಕೆ ವಿತರಿಸುವ ಕ್ರಮ ಭಾರತ ಆಹಾರ ನಿಗಮ ನಿಗದಿಪಡಿಸಿದ ವೇಳಾ ಪಟ್ಟಿಯಂತೆ ಅನುಸರಿಸಬೇಕಾಗುತ್ತದೆ.

1. ಅಂತ್ಯೋದಯ ಅನ್ನಯೋಜನೆ ಮತ್ತು ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವವರ ಯೋಜನೆಗಳಿಗಾಗಿ ಹಂಚಿಕೆಯಾಗಿರುವ ದವಸ ಧಾನ್ಯಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಪ್ರತಿ ತಿಂಗಳು 10ನೇ ತಾರೀಖಿನ ಒಳಗೆ ಸಂಪೂರ್ಣವಾಗಿ ಎತ್ತುವಳಿ ಮಾಡಬೇಕಾಗುತ್ತದೆ.

ಬಡತನದ ರೇಖೆಗಿಂತ ಮೇಲ್ಪಟ್ಟವರು ಮತ್ತು ಆರ್ಥಿಕವಾಗಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗಾಗಿ ಆಹಾರ ಧಾನ್ಯವನ್ನು ಆಗತ್ಯವನ್ನು ನೋಡಿಕೊಂಡು ಪ್ರತಿ ತಿಂಗಳು 20ರ ಒಳಗಾಗಿ ಎತ್ತುವಳಿ ಮಾಡಬೇಕಾಗುತ್ತದೆ

2. ಹಂಚಿಕೆಯಾದ ಆಹಾರ ಧಾನ್ಯವನ್ನು ನ್ಯಾಯಬೆಲೆ ಅಂಗಡಿದಾರರು ಸಗಟು ಮಳೆಯಿಂದ 15 ತಾರೀಖಿನ ಒಳಗೆ ಕಡ್ಡಾಯವಾಗಿ ಬಿಲ್ ಹಾಕಿಸಿ ಎತ್ತುವಳಿ ಮಾಡತಕ್ಕದ್ದು, ನಂತರ ಪಡಿತರ ಚೀಟಿದಾರರಿಗೆ ಎತ್ತುವಳಿ ಮಾಡಿದ ಆಹಾರ ಧಾನ್ಯಗಳನ್ನು ಆಯಾ ತಿಂಗಳ 25ನೇ ತಾರೀಖಿನ ಒಳಗೆ ವಿತರಿಸತಕ್ಕದ್ದು.

ಬಡತನದ ರೇಖೆಗಿಂತ ಕೆಳಮಟ್ಟದಲ್ಲಿರುವವರಿಗಾಗಿ, ಜಿಲ್ಲಾಧಿಕಾರಿಯವರಿಂದ ಒಪ್ಪಿಗೆ ಪಡೆದ ಕಂಟ್ರಾಕ್ಟುದಾರರ ಮೂಲಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಆಹಾರ ಧಾನ್ಯವನ್ನು ಪಡೆಯಬೇಕಾಗುತ್ತದೆ. ನಂತರ ಆಹಾರ ಸಾಮಗ್ರಿಗಳನ್ನು ಗ್ರಾಮಾಂತರ ಪ್ರದೇಶದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸಲಾಗುತ್ತದೆ. ಇತರೆ ಕಾರ್ಡುದಾರರಿಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯವರು ಸಗಟು ಮಳಿಗೆಗೆ ಹೋಗಿ, ಹಣ ಪಾವತಿ ಮಾಡಿ, ಆಹಾರ ಧಾನ್ಯಗಳನ್ನು ಪಡೆದು ಸಾರ್ವಜನಿಕರಿಗೆ ವಿತರಿಸುತ್ತಾರೆ. ತೂಕದಲ್ಲಿ ವ್ಯತ್ಯಾಸ ಬರದಂತೆ ನೋಡಿಕೊಳ್ಳಲು ನಿಗಮವು ಪ್ರತಿಯೊಂದು ಸಗಟು ಮಳಿಗೆಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಮಾಪಕಗಳನ್ನು ಹೊಂದಿರುತ್ತದೆ.

ಪ್ರತಿ ತಿಂಗಳ ರ್ಶಿಕೆಡಿಯಲ್ಲಿ ವಿವಿಧ ವರ್ಗದ ಜಿಲ್ಲಾವಾರು ದಾಸ್ತಾನು ವಿವರಗಳನ್ನು ದಾಸ್ತಾನು ವಿವರ ಎಂಬ ಈ ಕೆಳಗಿನ ರ್ಶೀಕೆಲ್ಲಿ ನೀಡಲಾಗಿದೆ.
 


ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮಕ್ಕೆ ಪ್ರತಿ ತಿಂಗಳು
ಹಂಚಲಾದ ಆಹಾರ ಧಾನ್ಯಗಳು 
ಅಕ್ಕಿ ಪ್ರಮಾಣ ಕ್ವಿಂಟಾಲ್‍ಗಳಲ್ಲಿ
ಬಡತನ ರೇಖೆಗಿಂತ ಮೇಲಿರುವವರು(ಪೋಲೀಸ್) 8348
ಬಡತನ ರೇಖೆಗಿಂತ ಕೆಳಗಿರುವವರು(ಅಕ್ಷಯ) 3,54,350

ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರು(ಅಕ್ಷಯ)

2,06850

ಅಂತ್ಯೋದಯ

245268
ಒಟ್ಟು 814816
   
ಗೋಧಿ ಪ್ರಮಾಣ ಕ್ವಿಂಟಾಲ್‍ಗಳಲಿ
ಬಡತನ ರೇಖೆಗಿಂತ ಮೇಲಿರುವವರು(ಪೋಲೀಸ್) 1536
ಬಡತನ ರೇಖೆಗಿಂತ ಕೆಳಗಿರುವವರು(ಅಕ್ಷಯ) 74831
ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರು(ಅಕ್ಷಯ) 28020
ಅಂತ್ಯೋದಯ 51230
ಒಟ್ಟು 155617
   
ಸಕ್ಕರೆ ಕ್ವಿಂಟಾಲ್‍ಗಳಲ್ಲಿ 43856

ಸಾರ್ವಜನಿಕ ವಿತರಣಾ ಪದ್ಧತಿಯಡಿಯಲ್ಲಿ ಕಾರ್ಡುದಾರರಿಗೆ
ಹಂಚಲಾದ ವಸ್ತುಗಳ ಬೆಲೆ :
ವಸ್ತುವಿನ ಹೆಸರು

ಸಗಟು ನಾಮಿನಿದಾರರ ಭಾರತ ಆಹಾರ ನಿಗಮಕ್ಕೆ ಪಾವತಿ ಸಬೇಕಾದ ದರ

ಸಗಟು ಮಾರಾಟ ದರ
(ಪ್ರತಿ ಕ್ವಿಂಟಾಲ್)

ಕಾರ್ಡ್ ದಾರರಿಗೆ ವಿತರಣೆ ಮಾಡುವ ಬೆಲೆ (ಪ್ರತಿ ಕೆ.ಜಿ.ಗೆ)

ಗ್ರಾಮಾಂತರ ನಗರ
ಬಡತನ ರೇಖೆಗಿಂತ ಮೇಲಿರುವವರು ಅಕ್ಕಿ ರೂ. 830.00 ರೂ. 874.00 ರೂ.871.00 ರೂ. 9.00
ಬಡತನ ರೇಖೆಗಿಂತ ಕೆಳಗಿರುವವರು ಅಕ್ಕಿ ರೂ. 565.00 ರೂ. 274.00 ---- ರೂ. 3.00
ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರು ಅಕ್ಕಿ ರೂ. 830.00 ರೂ. 274.00 ---- ರೂ. 3.00
ಬಡತನ ರೇಖೆಗಿಂತ ಮೇಲಿರುವವರು ಗೋಧಿ ರೂ. 610.00 ರೂ. 651.00 ರೂ. 648.00 ರೂ. 6.70
ಬಡತನ ರೇಖೆಗಿಂತ ಕೆಳಗಿರುವವರು ಗೋಧಿ ರೂ. 415.00 ರೂ. 281.00 ---- ರೂ. 3.00
ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವವರು ಗೋಧಿ ರೂ. 610.00 ರೂ. 281.00 ---- ರೂ. 3.00
ಸಕ್ಕರೆ ರೂ.1344.25 ರೂ. 1336.03 ---- ರೂ. 13.50
ಅಂತ್ಯೋದಯ ಅನ್ನ ಯೋಜನೆ ಅಕ್ಕಿ ರೂ. 300.00 ರೂ. 279.35 ---- ರೂ. 3.00
ಅಂತ್ಯೋದಯ ಅನ್ನ ಯೋಜನೆ ಗೋಧಿ ರೂ. 200.00 ರೂ. 185.00 ---- ರೂ. 2.00


 

ಪಡಿತರ ಚೀಟಿದಾರರಿಗೆ ನಿಗದಿಯಾಗಿರುವ ಹಂಚಿಕೆ ಪ್ರಮಾಣ
ಕುಟುಂಬದ ಒಬ್ಬ ಸದಸ್ಯರಿಗೆ = ಒಂದು ಯೂನಿಟ್

ಪಡಿತರ ಆಹಾರಧಾನ್ಯಗಳ ವಿತರಣೆಯನ್ನು ವಿವಿಧ ದರಗಳಲ್ಲಿ ಹಾಗೂ ಶ್ರೇಣಿವಾರು ಕೆಳಕಂಡಂತೆ ನಮೂದಿಸಿದೆ

ಕ್ರ.ಸಂಯೋಜನೆಗಳುದಾಸ್ತಾನುಪ್ರಮಾಣ ಪ್ರತಿ ಯೂನಿಟ್ (ಕೆಜಿಗಳಲ್ಲಿ)ಗರಿಷ್ಠ ಪ್ರಮಾಣ ಪ್ರತಿ ಕಾರ್ಡಗೆ (ಕೆಜಿಗಳಲ್ಲಿ)
1ಬಡತನ ರೇಖೆಗಿಂತ ಮೇಲಿರುವವರುಅಕ್ಕಿ (ಪೋಲೀಸ್)13
ಗೋದಿ (ಪೋಲೀಸ್)03
ಸಕ್ಕರೆ1.2
2.ಬಡತನ ರೇಖೆಗಿಂತ ಕೆಳಗಿರುವವರುಅಕ್ಕಿ (ಅಕ್ಷಯ)0120
ಗೋದಿ (ಅಕ್ಷಯ)0403
ಸಕ್ಕರೆ1.2
3.ಬಡತನ ರೇಖೆಗಿಂತ ಕೆಳಗಿರುವವರುಅಕ್ಕಿ (ಅಕ್ಷಯ)29
ಗೋದಿ (ಅಕ್ಷಯ)06