ಕನಿಷ್ಠ ಬೆಂಬಲ ಬೆಲೆಯ ಕಾರ್ಯಾಚರಣೆ (ಎಂಎಸ್‍ಪಿಓ)

ಕನಿಷ್ಠ ಬೆಂಬಲ ಬೆಲೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಸಲುವಾಗಿ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು, ಭಾರತ ಆಹಾರ ನಿಗಮದ ಏಜೆಂಟಿನಂತೆ ಕೆಲಸ ಮಾಡುತ್ತಿದೆ. ಈ ಯೋಜನೆಯ ಪ್ರಕಾರ ನಿಗಮವು ರೈತರಿಂದ ಭತ್ತ ಮತ್ತು ಇತರೆ ಕಾಳುಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಸಂಗ್ರಹಿಸಿ ಅವರನ್ನು ಸಂಕಷ್ಟ ಕಾಲದಲ್ಲಿ ಸಂರಕ್ಷಿಸುವು

ಇದಕ್ಕಾಗಿ ಎ.ಪಿ.ಎಂ.ಸಿ. ಜಾಗಗಳಲ್ಲಿ ಕನಿಷ್ಠ ಬೆಂಬಲ ಬೆಲೆಯ ಪದ್ಧತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಮತ್ತು ಅದರ ಅನುಕೂಲದ ಬಗ್ಗೆ ಹೆಚ್ಚು ಪ್ರಚಾರ ಕೊಡಲಾಗುತ್ತದೆ. ವ್ಯವಸಾಯ ಇಲಾಖೆಯಿಂದ ನೇಮಕಗೊಂಡ ಗ್ರೇಡರ್ಸ ಧಾನ್ಯಗಳ ಗುಣಮಟ್ಟವನ್ನು ಪರೀಕ್ಷಿಸಿ, ಶಿಫಾರಸ್ಸು ಮಾಡಿದ ತರುವಾಯ ಖರೀದಿಸಲಾಗುತ್ತದೆ. ಅಲ್ಲಿ ಮಾರಾಟಕ್ಕೆ ಬಂದ ಪ್ರತಿಯೊಬ್ಬ ರೈತರು ತಾವೇ ಸ್ವತಃ ನಿಜವಾದ ಬೆಳೆಗಾರರು ಎಂದು ಸಾಬೀತು ಪಡಿಸಲು ಅವರು ಪಹಣಿ ಪತ್ರದ ನಕಲನ್ನು ಹೊಂದಿರಬೇಕು. ಧಾನ್ಯದ ಮತ್ತು ಖಾಲಿ ಚೀಲದ ಬೆಲೆಯನ್ನು ಕಾಲಕಾಲಕ್ಕೆ ಭಾರತ ಸರ್ಕಾರ ನಿಗದಿಪಡಿಸಿದ ಬೆಲೆಯ ಮೇರೆಗೆ ರೈತರಿಗೆ ಧವಸ ಮಾರಿದ ಐದು ದಿನದೊಳಗಾಗಿ ಹಣ ಸಂದಾಯವಾಗುತ್ತದೆ.

ಹೀಗೆ ರೈತರಿಂದ ಸಂಗ್ರಹಿಸಿದ ಆಹಾರ ಧಾನ್ಯವನ್ನು ಭಾರತ ಆಹಾರ ನಿಗಮವು ಹರಾಜು ಮಾಡುವ ಮೂಲಕ ವಿಲೇವಾರಿ ಮಾಡಲಾಗತ್ತದೆ.

 


ಕನಿಷ್ಠ ಬೆಂಬಲ ಬೆಲೆಯ ಅಡಿಯಲ್ಲಿ ಆಯಾ ಸಾಲಿನಲ್ಲಿ ಸಂಗ್ರಹಿಸಿದ ಧಾನ್ಯಗಳ ವಿವರ

 
ಮೆ. ಟನ್ರೂ. / ಮೆ. ಟನ್
1.2000-01ಜೋಳ262027.387445.00
ರಾಗಿ18162.960445.00
ಸಜ್ಜೆ4512.310445.00
ಭತ್ತ ಸಾಮಾನ್ಯ 1158.045510.00
ಭತ್ತ `ಎ' ಶ್ರೇಣಿ --540.00
2.2001-02ಜೋಳ17782.984485.00
ರಾಗಿ77598.393485.00
ಸಜ್ಜೆ--485.00
ಭತ್ತ ಸಾಮಾನ್ಯ 110.425530.00
ಭತ್ತ `ಎ' ಶ್ರೇಣಿ --560.00
3.2002-03ಜೋಳ 485+5989.999490.00
ರಾಗಿ 485+59.250490.00
ಸಜ್ಜೆ 485+10--495.00
ಭತ್ತ ಸಾಮಾನ್ಯ --550.00
ಭತ್ತ `ಎ' ಶ್ರೇಣಿ --580.00
4.2003-04ಜೋಳ15590.943505.00
ರಾಗಿ--505.00
ಸಜ್ಜೆ--505.00
ಭತ್ತ ಸಾಮಾನ್ಯ--550.00
ಭತ್ತ `ಎ' ಶ್ರೇಣಿ--580.00
5.2004-05ಜೋಳ78573.207525.00
ರಾಗಿ48729.607515.00
ಸಜ್ಜೆ--515.00
ಗೋಧಿ--515.00
ಭತ್ತ ಸಾಮಾನ್ಯ 11480.366560.00
ಭತ್ತ `ಎ' ಶ್ರೇಣಿ 19266.445590.00
6.2005-06ಜೋಳ96111.552540.00
ರಾಗಿ65711.904525.00
ಭತ್ತ ಸಾಮಾನ್ಯ392.391570.00
ಭತ್ತ `ಎ' ಶ್ರೇಣಿ 1347.893600.00
7.2006-07ಜೋಳ--540.00
ರಾಗಿ--540.00
ಭತ್ತ ಸಾಮಾನ್ಯ 787.220580+40
ಭತ್ತ `ಎ' ಶ್ರೇಣಿ 674.016610+40
8.2007-08ಜೋಳ22.135620.00
ರಾಗಿ10703.770750.00
ಬಿಳಿ ಜೋಳ816.4861500.00
ಭತ್ತ ಸಾಮಾನ್ಯ --645+100
ಭತ್ತ `ಎ' ಶ್ರೇಣಿ --675+100


ಅಕ್ಷರ ದಾಸೋಹ ಯೋಜನೆ


ಅಕ್ಷರ ದಾಸೋಹ ಯೋಜನೆ ಅಕ್ಷರ ದಾಸೋಹ ಯೋಜನೆ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆುಂದ 2002-03ನೇ ಶೈಕ್ಷಣಕ ವರ್ಷದಲ್ಲಿ ಬೀದರ್, ಬಿಜಾಪುರ, ಬಳ್ಳಾರಿ, ಬಾಗಲಕೋಟೆ, ಗುಲ್ಬರ್ಗಾ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆ ಅಡಿಯಲ್ಲಿ ಬಿಸಿ ಊಟ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾವುತು. ಮತ್ತೆ ಸರ್ಕಾರವು ಯೋಜನೆಯನ್ನು 6 ರಿಂದ 7ನೇ ತರಗತಿ ಹಾಗು 8 ರಿಂದ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವನ್ನು ತೊಗರಿಬೇಳೆ, ಖಾದ್ಯತೈಲ ಹಾಗೂ ಅಯೋಡೈಸ್ಡ್ ಉಪ್ಪು ಸರಬರಾಜಿಗೆ ಪ್ರತಿನಿಧಿಯನ್ನಾಗಿ ನೇಮಕ ಮಾಡಲಾಗುತು. ಈ ಸಾಲಿನಲ್ಲಿ ನಿಗಮದಿಂದ ಒಟ್ಟು 4,87,671 ಕ್ವಿಂಟಾಲ್ ತೊಗರಿಬೇಳೆ, 5702 ಕೆ.ಎಲ್ ತಾಳೆಎಣ್ಣೆ ಹಾಗೂ 8552 ಕ್ವಿಂಟಾಲ್ ಅಯೋಡೈಸ್ಡ್ ಉಪ್ಪನ್ನು ಈ ಯೋಜನೆಯಡಿಯಲ್ಲಿ ಸರಬರಾಜು ಮಾಡಲ್ಪಟ್ಟಿತ್ತು. ಅಕ್ಟೋಬರ-2007 ರವರೆಗೆ ಸರಬರಾಜು ಮಾಡಲ್ಪಟ್ಟ ದಾಸ್ತಾನಿನ ಒಟ್ಟು ಇದು ರೂ. 14.6 ಕೋಟಿಗಳಷ್ಟಾಗಿರುತ್ತದೆ. ಮುಂದುವರಿದಂತೆ ಶಾಲಾ ಮಕ್ಕಳಿಗೆ ಡಬಲ ಫೋರ್ಟಿಫೈಡ್ ಉಪ್ಪನ್ನು ಸರಬರಾಜು ಮಾಡುವಂತೆ ಸೂಚಿಸಲಾತು. ಈ ಪ್ರಕಾರ ನವಂಬರ್ 2007 ರಿಂದ ಡಿಸೆಂಬರ್ 2008ರ ಅವಧಿಗೆ ಡಬಲ ಫೋರ್ಟಿಫೈಡ್ ಉಪ್ಪನ್ನು ಸರಬರಾಜು ಮಾಡಲು ಟೆಂಡರ್ ಕರೆದು ಸರಬರಾಜುದಾರರನ್ನು ನೇಮಿಸಲಾತುತು.

2003-04ನೇ ಸಾಲಿನಲ್ಲಿ ರಾಜ್ಯಾದ್ಯಂತ ಈ ಯೋಜನೆಯು ಅಕ್ಷರ ದಾಸೋಹ ಕಾರ್ಯಕ್ರಮವಾಗಿ ವಿಸ್ತರಿಸಲ್ಪಟ್ಟಿದೆ. ನಿಗಮವು ಎಲ್ಲಾ ತಾಲ್ಲೂಕಾ ಹಂತದವರೆಗೆ ತೊಗರಿಬೇಳೆ, ಖಾದ್ಯತೈಲ, ಹಾಗೂ ಉಪ್ಪು ಸರಬರಾಜಿಗಾಗಿ ಪ್ರತಿನಿಧಿಯಾಗಿ ನೇಮಿಸಲ್ಪಟ್ಟಿದೆ. ಕರ್ನಾಟಕ ಪಾರದರ್ಶಕದ ನಿಯಮದಂತೆ ತೊಗರಿಬೇಳೆ ಹಾಗೂ ಡಬಲ ಫೋರ್ಟಿಫೈಡ್ ಉಪ್ಪು ಸರಬರಾಜಿಗಾಗಿ ಟೆಂಡರ್ ಆಹ್ವಾನಿಸಿ ಎಲ್ಲಾ ಜಿಲ್ಲೆಗಳಿಗೆ ದರಗಳನ್ನು ಅಂತಿಮಗೊಳಿಸಲಾಗಿದೆ. ತಾಳೆಎಣ್ಣೆ ಸರಬಾರಿಜಿಗೆ ನಂದಾವುತ ಸಂಸ್ಥೆಗಳಿಂದ ಎರಡುತಿಂಗಳಿಗೊಮ್ಮೆ ತಾಳೆಎಣ್ಣೆ ಸರಬರಾಜು ಮಾಡಲಾಗುತ್ತದೆ.

2003-04 ರಿಂದ 2007-08 ವಾರ್ಷಿಕ ವರ್ಷದಲ್ಲಿ ಒಟ್ಟು ಸರಬರಾಜು ಮಾಡಲಾದ ಆಹಾರ ಧಾನ್ಯಗಳ ವಿವರ :

ವರ್ಷ ತೊಗರಿಬೇಳೆ ಕ್ವಿಂಟಾಲ್‍ಗಳಲ್ಲಿ. ಆರ್‍ಬಿಡಿ ತಾಳೆಎಣ್ಣೆ ಕೆ.ಎಲ್‍ಗಳಲ್ಲಿ. ಅಯೋಡೈಸ್ಡ್ ಉಪ್ಪು ಕ್ವಿಂಟಾಲ್‍ಗಳಲ್ಲಿ. ಹೆಸರು ಕಾಳು ಕ್ವಿಂಟಾಲ್‍ಗಳಲ್ಲಿ. ಕ್ವಿಂಟಾಲ್ಗಳು.
2003-04 127511 1932084 29482 2990 2993
2004-05 174150 4405334 44289 - -
2005-06 160868 2714403 39269 - -
2006-07 154564 2712610 37390 - -
2007-08 172032 3355841 31908 - -


ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 7ನೇ ತರಗತಿಯವರೆಗಿನ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಯನ್ನು ಡಿಸೆಂಬರ್ 2005 ರವರೆಗೆ ವಿಸ್ತರಿಸಲಾಗಿರುತ್ತದೆ, ಮುಂದುವರೆದಂತೆ ಕರ್ನಾಟಕ ಸರ್ಕಾರವು, ಈ ಸೌಲಭ್ಯವನ್ನು 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿರುತ್ತದೆ.

ಕ್ರ..ಸಂ 1 ರಿಂದ 5ನೇ ತರಗತಿಯವರೆಗೆ ಗ್ರಾಂಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಗ್ರಾಂಗಳಲ್ಲಿ
1 ಅಕ್ಕಿ /ಗೋಧಿ 100 150
2 ತೊಗರಿಬೇಳೆ 20 25
3 ಆರ್‍ಬಿಡಿ ತಾಳೆಎಣ್ಣೆ 03 06
4 ಡಬಲ ಫೋರ್ಟಿಫೈಡ್ ಉಪ್ಪು 02 02